M.Sc., DIEC, DISE, PGDELT
Social Worker, Writer and Marathon Sportsman
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಸಮಾಜದ ನೋವು–ನಲಿವುಗಳನ್ನು ಸಮೀಪದಿಂದ ಕಂಡು ಬೆಳೆದವನು ನಾನು. ಅಧಿಕಾರವಿಲ್ಲದೇನೇ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿದ್ದೇನೆ. ಸಮಾಜದ ಅಭಿವೃದ್ಧಿಗಾಗಿ ವೈಯಕ್ತಿಕ ಸುಖ–ಸೌಕರ್ಯಗಳನ್ನು ಪಕ್ಕಕ್ಕಿಟ್ಟು, ಇಂದಿಗೂ ಸರಳ ಜೀವನ ನಡೆಸುತ್ತಿದ್ದೇನೆ.
ನಾಗರಬಾವಿ ವಾರ್ಡಿನ ಮಾನ್ಯ ತಂದೆ–ತಾಯಂದಿರು, ಹಿರಿಯರು, ಸಹೋದರ–ಸಹೋದರಿಯರು, ಸ್ನೇಹಿತರು ಹಾಗೂ ಗೌರವಾನ್ವಿತ ನಾಗರಿಕ ಬಂಧುಗಳಿಗೆ ವೀರಯ್ಯ ಹಿರೇಮಠ ಅವರ ವಂದನೆಗಳು.
ನಾನು ಮುಂಬರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ (ಜಿಬಿಎ) ಚುನಾವಣೆಯಲ್ಲಿ ನಾಗರಬಾವಿ ವಾರ್ಡಿನ ತಮ್ಮ ಸೇವೆಗೆ ಆಕಾಂಕ್ಷಿಯಾಗಿದ್ದೇನೆ. ದಯವಿಟ್ಟು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ಪರಿಗಣಿಸಿ, ಜನಸೇವೆಗೆ ಅವಕಾಶ ನೀಡುವಂತೆ ಗೌರವಪೂರ್ವಕವಾಗಿ ಮನವಿ ಮಾಡುತ್ತೇನೆ.
ಸಮಾಜಸೇವೆಯನ್ನು ನನ್ನ ಧ್ಯೇಯವಾಗಿಸಿಕೊಂಡು, ಹಲವು ವರ್ಷಗಳಿಂದ ಯಾವುದೇ ಅಧಿಕಾರವಿಲ್ಲದೇ ಸಾರ್ವಜನಿಕ ಸಮಸ್ಯೆಗಳ ಪರಿಹಾರ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಮಾಜದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ.
ಇಲ್ಲಿಯವರೆಗೆ ನಾನು ಮಾಡಿದ ಸಮಾಜಮುಖಿ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ನಾಗರಬಾವಿ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ನಾಗರಬಾವಿ ವಾರ್ಡನ್ನು ಸ್ವಚ್ಛ, ಸುರಕ್ಷಿತ, ಅಭಿವೃದ್ಧಿ ಹೊಂದಿದ ಆದರ್ಶ ವಾರ್ಡನ್ನಾಗಿ ರೂಪಿಸುವುದು ನನ್ನ ಸಂಕಲ್ಪ. ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಿ, ಪಾರದರ್ಶಕ, ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ.
ತಮ್ಮ ಆಶೀರ್ವಾದ, ಮಾರ್ಗದರ್ಶನ ಮತ್ತು ಸಹಕಾರವೇ ನನ್ನ ಶಕ್ತಿ. ನಾಗರಬಾವಿ ವಾರ್ಡಿನ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಪೂರ್ಣ ಸಮರ್ಪಣೆಯಿಂದ ಸೇವೆ ಸಲ್ಲಿಸುವುದಾಗಿ ಪ್ರಾಮಾಣಿಕವಾಗಿ ಭರವಸೆ ನೀಡುತ್ತೇನೆ.
“ಆಯ್ಕೆಯಾದ ಕ್ಷಣದಿಂದಲೇ ಜನತಾದರ್ಶನದ ಮೂಲಕ ಜನರೊಂದಿಗೆ ನೇರ ಸಂಪರ್ಕ ಸಾಧಿಸಿ, ಅವರ ತುರ್ತು ಸಮಸ್ಯೆಗಳು ಮತ್ತು ಅಗತ್ಯಗಳನ್ನು ಪ್ರಾಥಮಿಕವಾಗಿ ಪರಿಹರಿಸುವುದರೊಂದಿಗೆ, ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಕೆಳಕಂಡ ಪ್ರಮುಖ ಯೋಜನೆಗಳನ್ನು ಜಾರಿಗೆ ತರುವುದಾಗಿ ಬದ್ಧನಾಗಿದ್ದೇನೆ.”
ಸಣ್ಣ ದೊಡ್ಡ ಎಲ್ಲ ಕಾಯಿಲೆಗೂ ನಮ್ಮ ವಾರ್ಡಿನ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮತ್ತು ಔಷಧಿ ಸಿಗಬೇಕು. ಹೊರಗೆ ಹೋಗಿ ಹಣ ಖರ್ಚು ಮಾಡಬೇಕಾದ ಸ್ಥಿತಿ ಬಾರದಂತೆ ನೋಡಿಕೊಳ್ಳಲಾಗುವುದು. ಉಚಿತ ಯೋಗ ಮತ್ತು ವ್ಯಾಯಾಮ ತರಬೇತಿಯೂ ಇರುತ್ತದೆ.
ನಮ್ಮ ಯುವಕರು ಉದ್ಯೋಗಕ್ಕಾಗಿ ಅಲೆದಾಡಬಾರದು. ಉದ್ಯೋಗ ಮೇಳಗಳ ಮೂಲಕ ಕೆಲಸದ ಅವಕಾಶ ಮತ್ತು ಸರ್ಕಾರಿ ಉದ್ಯೋಗಗಳಿಗೆ ಉಚಿತ ತರಬೇತಿ ಕೊಡುತ್ತೇವೆ.
ನೀರು, ವಿದ್ಯುತ್, ರಸ್ತೆ, ಒಳಚರಂಡಿ, ಪಾರ್ಕ್ –ಇವು ಬೇಡಿಕೆ ಅಲ್ಲ, ನಿಮ್ಮ ಹಕ್ಕು. ಇವೆಲ್ಲವನ್ನು ಸರಿಯಾಗಿ ಒದಗಿಸುವೆನು.
ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ವೇತನ, ಅರ್ಹರಿಗೆ ಯಾವುದೇ ತೊಂದರೆ ಇಲ್ಲದೆ ತಲುಪುವಂತೆ ಮಾಡುವೆನು.
ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲೇ ಖಾಸಗಿ ಶಾಲೆಗಳ ಮಟ್ಟದ ಗುಣಮಟ್ಟದ ಶಿಕ್ಷಣ ಸಿಗಬೇಕು. ಪೋಷಕರು ಲಕ್ಷಾಂತರ ಹಣ ಖರ್ಚು ಮಾಡಬೇಕಾಗಬಾರದು.
ಸ್ವಚ್ಛ, ಹಸಿರು ಮತ್ತು ಸುರಕ್ಷಿತ ವಾರ್ಡಾಗಿ ರೂಪಿಸುವುದೇ ನಮ್ಮ ಮೊದಲ ಆದ್ಯತೆ.