ರೇಸ್ ಆರಂಭವಾಗಲು
ನೋಂದಣಿ ಕೊನೆಗೊಳ್ಳುವುದು: ಮಂಗಳವಾರ, 4ನೇ ಜೂಲೈ 2023,, ರಾತ್ರಿ 11:59(ಭಾರತೀಯ ಕಾಲಮಾನ) ಅಥವಾ ನಮಗೆ ಅಗತ್ಯವಿರುವಷ್ಟು ನೋಂದಣಿಗಳು ದೊರೆತ ತಕ್ಷಣ ಎಲ್ಲಾ ವಿಭಾಗದ [10 ಕೆ , 3ಕೆ, ಮತ್ತು 3ಕೆ ಮಜಾ ರನ್ (ಮೋಜಿನ ಓಟ)] ನೋಂದಣಿಗಳು ಕೊನೆಗೊಳ್ಳುತ್ತವೆ.
ಸ್ಥಳ:ಇಂದಿರಾ ಕ್ಯಾಂಟೀನ್, ನಾಯಂಡಹಳ್ಳಿ (ನಾಯಂಡಹಳ್ಳಿ ಸಿಗ್ನಲ್ ಮತ್ತು ನಾಗರಭಾವಿ ಸರ್ವಿಸ್ ರಸ್ತೆ) ಬೆಂಗಳೂರು – 560026. (ಗಮನಿಸಿ: ಎಲ್ಲಾ ಓಟದ ಸ್ಪರ್ಧೆಗಳ ಪ್ರಾರಂಭ ಮತ್ತು ಅಂತ್ಯಗೊಳ್ಳುವ ಸ್ಥಳ ಒಂದೇ ಆಗಿರುತ್ತವೆ).
10 ಕಿ.ಮೀ, 3 ಕಿ.ಮೀ ಮತ್ತು 3 ಕಿ.ಮೀ U-16 (16 ವ ರ್ಷದ ಕೆಳಗಿನ ವಯೋಮಾನದವರಿಗೆ) ಹಾಗೂ 3 ಕಿ.ಮೀ ಮಜಾ ರನ್ ಓಟದ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. Age Group | I Position | II Position | III Position | |||
Men | Women | Men | Women | Men | Women | |
16-34 | 7,500 | 7,500 | 5,000 | 5,000 | 2,500 | 2,500 |
35-49 | 7,500 | 7,500 | 5,000 | 5,000 | 2,500 | 2,500 |
50 & Above | 7,500 | 7,500 | 5,000 | 5,000 | 2,500 | 2,500 |
Age Group | I Position | II Position | III Position | |||
Men | Women | Men | Women | Men | Women | |
Under 16 | 4,000 | 4,000 | 3,000 | 3,000 | 2,000 | 2,000 |
45 & above | 4,000 | 4,000 | 3,000 | 3,000 | 2,000 | 2,000 |
(10.06.2007 ರ ಮೊದಲು ಜನಿಸಿದವರು)
Applicant fulfilling the minimum age eligibility
12 ವರ್ಷ ಪೂರ್ಣಗೊಳಿಸಿರಬೇಕು (10.06.2011 ರಂದು ಅಥವಾ ಮೊದಲು ಜನಿಸಿದವರು).
03ಕಿ.ಮೀ ಮಜಾ ರನ್ ಒಂದು ಮೋಜಿನ ಓಟವಾಗಿದೆ ಸಮಯರಹಿತ ವರ್ಗವಾಗಿರುವುದರಿಂದ, ಭಾಗವಹಿಸುವವರ ಮುಕ್ತಾಯದ ಸಮಯವನ್ನು ಸೆರೆಹಿಡಿಯಲಾಗುವುದಿಲ್ಲ. ಈ
ವರ್ಗಕ್ಕೆ ಯಾವುದೇ ನಗದು ಬಹುಮಾನವಿಲ್ಲ ಎಂಬುದನ್ನು ಗಮನಿಸಿ. ಮಜಾ ರನ್ನಿನ ಎಲ್ಲಾ ಫಿನಿಷರ್ಗಳು ಪದಕ ಮತ್ತು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಮಾತ್ರ ಪಡೆಯುತ್ತಾರೆ.
ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ನೋಂದಣಿಯನ್ನು ಆನ್ಲೈನ್ ಅಥವಾ ಖುದ್ದಾಗಿ ಕಚೇರಿಗೆ ಬೇಟಿ ಕೊಡುವುದರ ಮೂಲಕ ಆಯಾ ವರ್ಗಕ್ಕೆ ಸಲ್ಲಬೇಕಾದ ಶುಲ್ಕವನ್ನು ಭರಿಸಿ ನೋಂದಾಯಿಸಿಕೊಳ್ಳಬಹುದು. ಓಟದ ಸ್ಪರ್ಧೆಯ ದಿನ (ಭಾನುವಾರ, ಜುಲೈ 9, 2023)ರ ರಂದು ನೋಂದಣಿ ಸಾಧ್ಯವಿಲ್ಲ.
Group entries: Group entries shall be accepted for all the participative race categories, i.e., 10 KM, 3KM and Majja Run (3KM). There shall be a minimum of 20 individual entries from the said participative categories to comprise a group. Mail to the Director of the Race veeraiah_hm@yahoo.com
ತಮ್ಮ ಆನ್ಲೈನ್ ಅರ್ಜಿಯನ್ನು ತಾವು ಯಶಸ್ವಿಯಾಗಿ ಸಲ್ಲಿಸಿದ ನಂತರ, ತಮ್ಮ ಆನ್ಲೈನ್ ಪ್ರೊಫೈಲ್ನಲ್ಲಿರುವ ವಿವರಗಳನ್ನು ತಮ್ಮಿಂದ ಬದಲಾಯಿಸಲು/ಎಡಿಟ್ ಮಾಡಲು ಸಾಧ್ಯವಿಲ್ಲ. ಯಾವುದೇ ತಿದ್ದುಪಡಿಗಳಿಗಾಗಿ, ದಯವಿಟ್ಟು ಇಮೇಲ್: veeraiah_hm@yahoo.com
ತಮ್ಮ ವಯಸ್ಸು ಮತ್ತು ವಿಳಾಸವನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಟೋರ್ಟ್ ಅಥವಾ ಸಮಾನ ದಾಖಲೆಗಳನ್ನು ಒದಗಿಸುವುದು.
ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಓಟದ ದಿನದಂದು ತಮ್ಮ ಬಿಬ್ಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂಬುವುದನ್ನು ದಯವಿಟ್ಟು ಗಮನಿಸಿ.
ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ತಮ್ಮ ಚೆಸ್ಟ್ ನಂಬರ್/ಬಿಬ್ ಸಂಖ್ಯೆಯನ್ನು ವೈಯಕ್ತಿಕವಾಗಿ ಬಿಬ್ ಸಂಗ್ರಹ ಕೇಂದ್ರದಿಂದ ಜುಲೈ 7, 2023 (ಶುಕ್ರವಾರ) ಮತ್ತು ಜುಲೈ 8, 2023(ಶನಿವಾರ) ದಂದು ಬೆಳಿಗ್ಗೆ 10 ರಿಂದ ಸಾಯಂಕಾಲ 8:00 ಗಂಟೆವರೆಗೆ ಸಂಗ್ರಹಿಸಬೇಕು. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಓಟದ ದಿನದಂದು ತಮ್ಮ ಬಿಬ್ಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂಬುವುದನ್ನು ದಯವಿಟ್ಟು ಗಮನಿಸಿ.
ಟಿ-ಶರ್ಟ್, ಪದಕ ಮತ್ತು ಪ್ರಮಾಣಪತ್ರ ಪ್ರತಿ ನೋಂದಾಯಿತ ಅಥ್ಲೀಟ್ಗಳು ಟಿ-ಶರ್ಟ್ ಅನ್ನು ಪಡೆಯುತ್ತಾರೆ ಮತ್ತು ಓಟದ ಕೊನೆಯಲ್ಲಿ, ಒಪನ್ 10ಕಿಮೀ, 03ಕಿಮೀ, 03ಕಿಮೀ U-16 ಮತ್ತು 03ಕಿಮೀ ಮಜಾ ರನ್ನಿನ ಎಲ್ಲಾ ಫಿನಿಷರ್ಗಳು ಪ್ರಮಾಣಪತ್ರ ಮತ್ತು ಫಿನಿಶರ್ ಪದಕವನ್ನು ಪಡೆಯುತ್ತಾರೆ. ಸ್ಥಳದಿಂದ ಹೊರಡುವ ಮೊದಲು ದಯವಿಟ್ಟು ತಮ್ಮ ಪದಕ ಮತ್ತು ಪ್ರಮಾಣಪತ್ರವನ್ನು ಸಂಗ್ರಹಿಸಿರಿ, ಓಟದ ದಿನದಂದು ಅವುಗಳನ್ನು ಸಂಗ್ರಹಿಸಲು ವಿಫಲವಾದರೆ ವೈಯಕ್ತಿಕ ಓಟಗಾರರಿಗೆ ಪದಕ ಮತ್ತು ಪ್ರಮಾಣಪತ್ರವನ್ನು ಅಂಚೆ ಮುಖಾಂತರ ಕಳುಹಿಸಲಾಗುವುದಿಲ್ಲ.
ಬೋರ್ಡಿಂಗ್ ಮತ್ತು ವಸತಿ: ಪರಸ್ಥಳದಿಂದ ಬರುವ ಕ್ರೀಡಾ ಪೇಮಿಗಳಿಗೆ 10ನೇ ಜುಲೈ 2023 ರಂದು ರಾತ್ರಿ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ (ಹೊರಗಿನವರಿಗೆ ಮಾತ್ರ, ಆದರೆ ಬೆಂಗಳೂರು ನಗರದ ನಿವಾಸಿಗಳಿಗೆ ಅಲ್ಲ).
ಬ್ಯಾಗೇಜ್ / ಲಗೇಜ್ ಕೌಂಟರ್ ಇರುತ್ತದೆ, ಆದರೆ ಸ್ಪರ್ದಾಳುಗಳು ಅದರಲ್ಲಿ ಮೊಬೈಲ್ ಪೋನ್ಗಳು, ಹಣ ಇತ್ಯಾದಿಗಳನ್ನು ಇಡುವಂತಿಲ್ಲ ಏಕೆಂದರೆ ಅಂತಹ ಯಾವುದೇ ನಷ್ಟಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ
ವಿಶ್ರಾಂತಿ ವಲಯ: ಕ್ರೀಡಾಪಟುಗಳು ಓಡಿದ ನಂತರ ವ್ಯಾಯಾಮ ಮಾಡಲು ರಿಲ್ಯಾಕ್ಸೇಶನ್ ಜೋನ್ ವ್ಯವಸ್ಥೆಗೊಳಿಸಲಾಗಿದೆ.
ಶೌಚಾಲಯಗಳು: ಭಾಗವಹಿಸುವವರ ಸಂಖ್ಯೆಯನ್ನು ಆಧರಿಸಿ ಮೊಬೈಲ್ ಶೌಚಾಲಯಗಳು ಇರುತ್ತವೆ.
ಕಾರ್ಯಕ್ರಮ, ವೀಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ :
ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಪೋಟೋ ಮತ್ತು ವಿಡಿಯೋ ಮಾಡಲಾಗುವುದು.
ಫ್ಲ್ಯಾಗ್-ಆಫ್ ಮತ್ತು ಬಹುಮಾನ ವಿತರಣೆಯ ಸಮಯದಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಬಹುಮಾನ ವಿತರಣಾ ಕಾರ್ಯಕ್ರಮವು ಓಟದ ದಿನದಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
ವಾಹನ ನಿಲುಗಡೆ: ನಾಯಂಡಹಳ್ಳಿ ಸಿಗ್ನಲ್ ಪಕ್ಕದಲ್ಲಿರುವ ಮೈಸೂರು ರೋಡ್ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಎಲ್ಲಾ ವಾಹನಗಳಿಗೆ ಯೂಸ್ ಮತ್ತು ಪೇ ಪಾರ್ಕಿಂಗ್ ಸ್ಥಳವಿದೆ
ವೈದ್ಯರು: ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯಕೀಯ ತಂಡದವರಿಂದ ಆಂಬ್ಯುಲೆನ್ಸ್ ಒಳಗೊಂಡಂತೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಲಭ್ಯವಿರುತ್ತದೆ (ಈಗಾಗಲೇ ಆರೋಗ್ಯ ಸಮಸ್ಯೆ ಇರುವಂತವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ, ಒಂದೊಮ್ಮೆ ಭಾಗವಹಿಸಿದವರು ಪ್ರಥಮ ಚಿಕಿತ್ಸೆಯನ್ನು ಹೊರತುಪಡಿಸಿ ಬೇರಿನ್ನಾವುದಕ್ಕೂ ನಾವು ಜವಾಬ್ದಾರರಲ್ಲ).
ಆರೋಗ್ಯ ಸಮಸ್ಯೆ ಇರುವಂತವರಿಗೆ ಓಟದಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದ್ದು, ಅಂತಹ ದುರ್ಘಟನೆಗಳು ಸಂಭವಿಸಿದರೆ ನಾವು ಜವಾಬ್ದಾರರಲ್ಲ.
ಪೊಲೀಸ್ (ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ): ಕ್ರೀಡಾಪಟುಗಳು ಓಡುವ ರಸ್ತೆಯ ಉದ್ದಕ್ಕೂ, ಪೋಲೀಸ್ ರಕ್ಷಣೆ ಇರುತ್ತದೆ, ಪ್ರತಿ ಜಂಕ್ಷನ್ನಲ್ಲಿ ಟ್ರಾಫಿಕ್ ಪೊಲೀಸರು ಒಟದ ಸುಗಮ ಕ್ಷಣಕ್ಕಾಗಿ ಟ್ರಾಫಿಕ್ ಅನ್ನು ನಿಯಂತ್ರಿಸುತ್ತಾರೆ.
ಅಗ್ನಿಶಾಮಕ ದಳ: ಸುರಕ್ಷತಾ ಕ್ರಮಗಳಿಗಾಗಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ವಿನಂತಿಸಲಾಗಿದೆ.
ಹೆಸರುಗಳನ್ನು ನೋಂದಾಯಿಸಿದ ಕ್ರೀಡಾಪಟುಗಳು ಓಟದ ದಿನದಂದು, ಮೊದಲು ಬಂದವರು ಮೊದಲಿನ ಸಾಲಿನಲ್ಲಿ ನಿಲ್ಲುತ್ತಾರೆ.
ತುರ್ತುಸ್ಥಿತಿ//ಸರಕಾರಿ ನಿಬಂಧನೆಗಳು /ಸಾರ್ವಜನಿಕ ಸಭೆ ನಿಷೇಧಗಳು ಇತ್ಯಾದಿಗಳ ಸಂದರ್ಭದಲ್ಲಿ, ಓಟವನ್ನು ಮುಂದೂಡಲಾಗುತ್ತದೆ ಮತ್ತು ನಮ್ಮ ಅಧಿಕೃತ ಸಾಮಾಜಿಕ ಮಾಧ್ಯಮವಾದ Facebook, Twitter, Instagram ಮತ್ತು ವೆಬ್ಸೈಟ್ ನಲ್ಲಿ ಪರ್ಯಾಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ.
ಅನರ್ಹ ಗೊಳಿಸುವಿಕೆ: ಒಟಗಾರರು ತಮ್ಮ ಚೆಸ್ಟ್ /ಬಿಬ್ ನಂಬರನ್ನು ಇತರರೊಂದಿಗೆ ವಿನಿಮಯ ಮಾಡಿಕೊಂಡಿರುವುದು ಕಂಡುಬಂದರೆ, ಸ್ಪರ್ಧೆಯಿಂದ ಅನರ್ಹಗೊಳಿಸಲಾಗುತ್ತದೆ. ಅಂತಹ ಓಟಗಾರರು ಯಾವುದೇ ಸಮಯ(ಟೈಮಿಂಗ್ ಸರ್ಟಿಫಿಕೇಟ್) ಅಥವಾ ಬಹುಮಾನದ ಹಣಕ್ಕೆ ಅರ್ಹರಾಗಿರುವುದಿಲ್ಲ(ಅನ್ವಯಿಸುವಲ್ಲಿ).
ಒಮ್ಮೆ ನೋಂದಣಿ ಪೂರ್ಣಗೊಂಡ ನಂತರ ಪ್ರವೇಶ ಶುಲ್ಕವನ್ನು ಯಾವುದೇ ಸಂದರ್ಭಗಳಲ್ಲಿ ಮರುಪಾವತಿಸಲಾಗುವುದಿಲ್ಲ ಮತ್ತು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಮತ್ತು ಭವಿಷ್ಯದ ಕ್ರೀಡೆಗಳಿಗೆ ನೋಂದಣಿ ಶುಲ್ಕವನ್ನು ವರ್ಗಾಯಿಸಲಾಗುವುದಿಲ್ಲ.
ಸೂಚನೆ:
ಹೆಚ್ಚಿನ ವಿವರಗಳಿಗಾಗಿ: ಆಕಾಂಕ್ಷಿಗಳು ಕಛೇರಿ ಸಮಯ ಬೆಳಿಗ್ಗೆ 11:00 ರಿಂದ ಸಾಯಂಕಾಲ 5:00 ಗಂಟೆಯ ಮುಂಚಿತವಾಗಿ ಕರೆ ಮಾಡಬಹುದು ಅಥವಾ,ಪೂರ್ವ ಅನುಮತಿಯೊಂದಿಗೆ, ವೈಯಕ್ತಿಕವಾಗಿ ಭೇಟಿ ನೀಡಬಹುದು. ಮೊಬೈಲ್ ಮತ್ತು (WhatsApp) ಸಂಖ್ಯೆ: 9448387950, 9590981865
ಕಚೇರಿ ವಿಳಾಸ: #8 ಸಾಯಿ ರೋಡ್, ಬಿದ್ರು ಮಳೆ ಸರ್ಕಲ್ ಹತ್ತಿರ, ವಿನಾಯಕ ಬಡಾವಣೆ, ನಾಯಂಡಹಳ್ಳಿ, ಬೆಂಗಳೂರು –560026, ಇ-ಮೇಲ್:- veeraiah_hm@yahoo.com WhatsApp and Google Pay/ PhonePe/ Paytm Number-9448387950.