Nayandahalli 10K Run

ನಾಯಂಡಹಳ್ಳಿ 10K - 2023

ರೇಸ್ ಆರಂಭವಾಗಲು

Days
Hours
Minutes
Seconds
ಕೊನೆಗೊಳ್ಳುವುದು

ನೋಂದಣಿ ಕೊನೆಗೊಳ್ಳುವುದು: ಮಂಗಳವಾರ, 4ನೇ ಜೂಲೈ 2023,, ರಾತ್ರಿ 11:59(ಭಾರತೀಯ ಕಾಲಮಾನ) ಅಥವಾ ನಮಗೆ ಅಗತ್ಯವಿರುವಷ್ಟು ನೋಂದಣಿಗಳು ದೊರೆತ ತಕ್ಷಣ ಎಲ್ಲಾ ವಿಭಾಗದ [10 ಕೆ , 3ಕೆ, ಮತ್ತು 3ಕೆ ಮಜಾ ರನ್ (ಮೋಜಿನ ಓಟ)] ನೋಂದಣಿಗಳು ಕೊನೆಗೊಳ್ಳುತ್ತವೆ.

ಸ್ಥಳ:ಇಂದಿರಾ ಕ್ಯಾಂಟೀನ್, ನಾಯಂಡಹಳ್ಳಿ (ನಾಯಂಡಹಳ್ಳಿ ಸಿಗ್ನಲ್ ಮತ್ತು ನಾಗರಭಾವಿ ಸರ್ವಿಸ್ ರಸ್ತೆ) ಬೆಂಗಳೂರು – 560026. (ಗಮನಿಸಿ: ಎಲ್ಲಾ ಓಟದ ಸ್ಪರ್ಧೆಗಳ ಪ್ರಾರಂಭ ಮತ್ತು ಅಂತ್ಯಗೊಳ್ಳುವ ಸ್ಥಳ ಒಂದೇ ಆಗಿರುತ್ತವೆ).
10 ಕಿ.ಮೀ, 3 ಕಿ.ಮೀ ಮತ್ತು 3 ಕಿ.ಮೀ U-16 (16 ವ ರ್ಷದ ಕೆಳಗಿನ ವಯೋಮಾನದವರಿಗೆ) ಹಾಗೂ 3 ಕಿ.ಮೀ ಮಜಾ ರನ್ ಓಟದ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಓಪನ್ 10 ಕಿ.ಮೀ ಸ್ಪರ್ಧೆಯ ನಗದು ಬಹುಮಾನ:

Age GroupI PositionII PositionIII Position
MenWomenMenWomenMenWomen
16-347,5007,5005,0005,0002,5002,500
35-497,5007,5005,0005,0002,5002,500
50 & Above7,5007,5005,0005,0002,5002,500

ಓಪನ್ 03ಕಿ.ಮೀ ಮತ್ತು U-16 ಸ್ಪರ್ಧೆಯ ನಗದು ಬಹುಮಾನ:

Age GroupI PositionII PositionIII Position
MenWomenMenWomenMenWomen
Under 164,0004,0003,0003,0002,0002,000
45 & above4,0004,0003,0003,0002,0002,000

ಬಹುಮಾನದ ಹಣವನ್ನು ಭಾರತೀಯ ರೂಪಾಯಿಗಳಲ್ಲಿ ಮಾತ್ರ ವಿತರಿಸಲಾಗುತ್ತದೆ. ಎಲ್ಲಾ ಬಹುಮಾನಗಳು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿರಿತ್ತವೆ ಮತ್ತು ಗನ್ ಸಮಯವನ್ನು ಆಧರಿಸಿವೆ. ಘೋಷಿಸಲಾದ ಬಹುಮಾನ ವಿಜೇತರು ಅಗತ್ಯವಿದ್ದಂತೆ ಗುರುತಿನ/ ವಯಸ್ಸಿನ ಹೆಚ್ಚಿನ ಪುರಾವೆಗಳನ್ನು ಸಲ್ಲಿಸಬೇಕಾಗಬಹುದು.

ಅರ್ಹತೆ

Event name: Under 16

(10.06.2007 ರ ಮೊದಲು ಜನಿಸಿದವರು)

ಓಪನ್ 10ಕಿ.ಮೀ ಅಥವಾ 03 ಕಿ.ಮೀ ಓಟದ ಸ್ಪರ್ಧೆಗಾಗಿ:

Applicant fulfilling the minimum age eligibility

  • 16 ವರ್ಷ ಪೂರ್ಣಗೊಳಿಸಿರಬೇಕು (10.06.2007 ರಂದು ಅಥವಾ ಮೊದಲು ಜನಿಸಿದವರು).
  • 35 ವರ್ಷ ಪೂರ್ಣಗೊಳಿಸಿರಬೇಕು (10.06.1988 ರಂದು ಅಥವಾ ಮೊದಲು ಜನಿಸಿದವರು).
  • 45 ವರ್ಷ ಪೂರ್ಣಗೊಳಿಸಿರಬೇಕು (10.06.1978 ರಂದು ಅಥವಾ ಮೊದಲು ಜನಿಸಿದವರು).
  • 50 ವರ್ಷ ಪೂರ್ಣಗೊಳಿಸಿರಬೇಕು (10.06.1973 ರಂದು ಅಥವಾ ಮೊದಲು ಜನಿಸಿದವರು).

Event name: 3K ಮಜಾ ರನ್(ಮೋಜಿನ ಓಟ):

12 ವರ್ಷ ಪೂರ್ಣಗೊಳಿಸಿರಬೇಕು (10.06.2011 ರಂದು ಅಥವಾ ಮೊದಲು ಜನಿಸಿದವರು).

03ಕಿ.ಮೀ ಮಜಾ ರನ್ ಒಂದು ಮೋಜಿನ ಓಟವಾಗಿದೆ ಸಮಯರಹಿತ ವರ್ಗವಾಗಿರುವುದರಿಂದ, ಭಾಗವಹಿಸುವವರ ಮುಕ್ತಾಯದ ಸಮಯವನ್ನು ಸೆರೆಹಿಡಿಯಲಾಗುವುದಿಲ್ಲ. ಈ

ವರ್ಗಕ್ಕೆ ಯಾವುದೇ ನಗದು ಬಹುಮಾನವಿಲ್ಲ ಎಂಬುದನ್ನು ಗಮನಿಸಿ. ಮಜಾ ರನ್ನಿನ ಎಲ್ಲಾ ಫಿನಿಷರ್ಗಳು ಪದಕ ಮತ್ತು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಮಾತ್ರ ಪಡೆಯುತ್ತಾರೆ.

ಓಟದ ವಿಭಾಗಗಳು

Open 10K

ನೋಂದಣಿ ಶುಲ್ಕ

₹ 950

Open3k - 16 ವರ್ಷದೊಳಗಿನವರು ಮತ್ತು 45 ವರ್ಷ ಹಾಗೂ ಮೇಲ್ಪಟ್ಟವರು

ನೋಂದಣಿ ಶುಲ್ಕ

₹ 850

3K ಮಜಾ ರನ್(ಮೋಜಿನ ಓಟ)

ನೋಂದಣಿ ಶುಲ್ಕ

₹ 650

ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ನೋಂದಣಿಯನ್ನು ಆನ್‌ಲೈನ್ ಅಥವಾ ಖುದ್ದಾಗಿ ಕಚೇರಿಗೆ ಬೇಟಿ ಕೊಡುವುದರ ಮೂಲಕ ಆಯಾ ವರ್ಗಕ್ಕೆ ಸಲ್ಲಬೇಕಾದ ಶುಲ್ಕವನ್ನು ಭರಿಸಿ ನೋಂದಾಯಿಸಿಕೊಳ್ಳಬಹುದು. ಓಟದ ಸ್ಪರ್ಧೆಯ ದಿನ (ಭಾನುವಾರ, ಜುಲೈ 9, 2023)ರ ರಂದು ನೋಂದಣಿ ಸಾಧ್ಯವಿಲ್ಲ.

Group entries: Group entries shall be accepted for all the participative race categories, i.e., 10 KM, 3KM and Majja Run (3KM). There shall be a minimum of 20 individual entries from the said participative categories to comprise a group. Mail to the Director of the Race veeraiah_hm@yahoo.com

ತಮ್ಮ ಆನ್‌ಲೈನ್ ಅರ್ಜಿಯನ್ನು ತಾವು ಯಶಸ್ವಿಯಾಗಿ ಸಲ್ಲಿಸಿದ ನಂತರ, ತಮ್ಮ ಆನ್‌ಲೈನ್ ಪ್ರೊಫೈಲ್ನಲ್ಲಿರುವ ವಿವರಗಳನ್ನು ತಮ್ಮಿಂದ ಬದಲಾಯಿಸಲು/ಎಡಿಟ್ ಮಾಡಲು ಸಾಧ್ಯವಿಲ್ಲ. ಯಾವುದೇ ತಿದ್ದುಪಡಿಗಳಿಗಾಗಿ, ದಯವಿಟ್ಟು ಇಮೇಲ್: veeraiah_hm@yahoo.com

ತಮ್ಮ ವಯಸ್ಸು ಮತ್ತು ವಿಳಾಸವನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಟೋರ್ಟ್ ಅಥವಾ ಸಮಾನ ದಾಖಲೆಗಳನ್ನು ಒದಗಿಸುವುದು.

ಚೆಸ್ಟ್ ಸಂಖ್ಯೆ:

ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಓಟದ ದಿನದಂದು ತಮ್ಮ ಬಿಬ್ಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂಬುವುದನ್ನು ದಯವಿಟ್ಟು ಗಮನಿಸಿ.

ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ತಮ್ಮ ಚೆಸ್ಟ್ ನಂಬರ್/ಬಿಬ್ ಸಂಖ್ಯೆಯನ್ನು ವೈಯಕ್ತಿಕವಾಗಿ ಬಿಬ್ ಸಂಗ್ರಹ ಕೇಂದ್ರದಿಂದ ಜುಲೈ 7, 2023 (ಶುಕ್ರವಾರ) ಮತ್ತು ಜುಲೈ 8, 2023(ಶನಿವಾರ) ದಂದು ಬೆಳಿಗ್ಗೆ 10 ರಿಂದ ಸಾಯಂಕಾಲ 8:00 ಗಂಟೆವರೆಗೆ ಸಂಗ್ರಹಿಸಬೇಕು. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಓಟದ ದಿನದಂದು ತಮ್ಮ ಬಿಬ್ಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂಬುವುದನ್ನು ದಯವಿಟ್ಟು ಗಮನಿಸಿ.

ಟಿ-ಶರ್ಟ್, ಪದಕ ಮತ್ತು ಪ್ರಮಾಣಪತ್ರ ಪ್ರತಿ ನೋಂದಾಯಿತ ಅಥ್ಲೀಟ್ಗಳು ಟಿ-ಶರ್ಟ್ ಅನ್ನು ಪಡೆಯುತ್ತಾರೆ ಮತ್ತು ಓಟದ ಕೊನೆಯಲ್ಲಿ, ಒಪನ್ 10ಕಿಮೀ, 03ಕಿಮೀ, 03ಕಿಮೀ U-16 ಮತ್ತು 03ಕಿಮೀ ಮಜಾ ರನ್ನಿನ ಎಲ್ಲಾ ಫಿನಿಷರ್ಗಳು ಪ್ರಮಾಣಪತ್ರ ಮತ್ತು ಫಿನಿಶರ್ ಪದಕವನ್ನು ಪಡೆಯುತ್ತಾರೆ. ಸ್ಥಳದಿಂದ ಹೊರಡುವ ಮೊದಲು ದಯವಿಟ್ಟು ತಮ್ಮ ಪದಕ ಮತ್ತು ಪ್ರಮಾಣಪತ್ರವನ್ನು ಸಂಗ್ರಹಿಸಿರಿ, ಓಟದ ದಿನದಂದು ಅವುಗಳನ್ನು ಸಂಗ್ರಹಿಸಲು ವಿಫಲವಾದರೆ ವೈಯಕ್ತಿಕ ಓಟಗಾರರಿಗೆ ಪದಕ ಮತ್ತು ಪ್ರಮಾಣಪತ್ರವನ್ನು ಅಂಚೆ ಮುಖಾಂತರ ಕಳುಹಿಸಲಾಗುವುದಿಲ್ಲ.

Location of the CHEST/ BIB Number distribution counter.

ತಮ್ಮ ಮಾಹಿತಿಗಾಗಿ: ಓಟದ ಸಮಯದಲ್ಲಿ, ಈ ಕೆಳಗೆ ಒದಗಿಸಲಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದ್ದೇವೆ.

  • ತಾವು ಓಡಬೇಕಾದ ಓಪನ್ 10ಕಿಮೀ, 03ಕಿಮೀ, U-16 03 ಕಿಮೀ ಮತ್ತು 03 ಕಿಮೀ ಮಜಾ ರನ್ ಹಾದು ಹೋಗುವ ಮಾರ್ಗವನ್ನು ತೋರಿಸಲು ಮುಂದೆ ಮೂರು ಪೈಲೆಟ್ ಗಳು ಇರುತ್ತಾರೆ.
  • ಓಪನ್ 10ಕಿಮೀ, 03ಕಿಮೀ, U-16 03ಕಿಮೀ ಮತ್ತು 03 ಕಿಮೀ ಮಜಾ ರನ್ ಓಟದ ಉದ್ದಕ್ಕೂ, ರಸ್ತೆಯಲ್ಲಿ ದಿಕ್ಕಿನ ಗುರುತುಗಳಿರುತ್ತವೆ. ಪ್ರತಿ ಕಿಲೋಮೀಟರ್ಗೆ,
  • ಭಾಗವಹಿಸುವವರು ಪೂರ್ಣಗೊಳಿಸಿದ ಕಿಲೋಮೀಟರ್ಗಳನ್ನು ತೋರಿಸಲು ಬೋರ್ಡ್ಗಳು ಇರುತ್ತವೆ.
  • ಭಾಗವಹಿಸುವವರಿಗೆ ಮಾರ್ಗದರ್ಶನ ನೀಡಲು ಮತ್ತು ಅವರ ರನ್ನಿಂಗ ಟ್ರ್ಯಾಕ್ ಅನ್ನು ಸುಲಭವಾಗಿ ತಿಳಿದುಕೊಳ್ಳಲು ಪ್ರತಿ ಟರ್ನಿಂಗ್ ಪಾಯಿಂಟ್ನಲ್ಲಿ ಸ್ವಯಂಸೇವಕರು ಇರುತ್ತಾರೆ.
  • ರೂಟ್ ಮ್ಯಾಪು ಕೂಡ ತಮಗೆ ಲಭ್ಯವಿದೆ.

ತಿಳಿದುಕೊಳ್ಳಬೇಕಾದ ಸಾಮಾನ್ಯ ವಿಷಯಗಳು

ಉಪಹಾರ:

  • ಕುಡಿಯುವ ನೀರು: ಪ್ರತಿ 2 ಕಿಲೋಮೀಟರ್‌ಗಳಿಗೆ ಕುಡಿಯುವ ನೀರು ಲಭ್ಯವಿರುತ್ತದೆ. ಓಟದ ಸ್ಪರ್ಧೆಯು ಮುಕ್ತಾಯಗೊಳ್ಳುವ ಸ್ಥಳದಲ್ಲಿ
  • ಪ್ರತಿಯೊಬ್ಬರಿಗೂ ಎಲೆಕ್ಟೋರಲ್ ಮತ್ತು ಗ್ಲೂಕೋಸ್ ನೀರಿನ ವ್ಯವಸ್ಥೆಗೊಳಿಸಲಾಗಿದೆ.
  • ಉಪಹಾರ: ಪ್ರತಿ ನೋಂದಾಯಿತ ಕ್ರೀಡಾ ಪ್ರೇಮಿಗಳು ತಮ್ಮ ಚೆಸ್ಟ್ ನಂಬರ್/ಬಿಬ್ ಸಂಖ್ಯೆಯನ್ನು ಹಿಂದಿರುಗಿಸಿದ ನಂತರ ಉಪಹಾರವನ್ನು ಸಂಗ್ರಹಿಸಲು ಅರ್ಹರಾಗಿರುತ್ತಾರೆ.


ಬೋರ್ಡಿಂಗ್ ಮತ್ತು ವಸತಿ
: ಪರಸ್ಥಳದಿಂದ ಬರುವ ಕ್ರೀಡಾ ಪೇಮಿಗಳಿಗೆ 10ನೇ ಜುಲೈ 2023 ರಂದು ರಾತ್ರಿ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ (ಹೊರಗಿನವರಿಗೆ ಮಾತ್ರ, ಆದರೆ ಬೆಂಗಳೂರು ನಗರದ ನಿವಾಸಿಗಳಿಗೆ ಅಲ್ಲ).

ಬ್ಯಾಗೇಜ್ / ಲಗೇಜ್ ಕೌಂಟರ್ ಇರುತ್ತದೆ, ಆದರೆ ಸ್ಪರ್ದಾಳುಗಳು ಅದರಲ್ಲಿ ಮೊಬೈಲ್ ಪೋನ್ಗಳು, ಹಣ ಇತ್ಯಾದಿಗಳನ್ನು ಇಡುವಂತಿಲ್ಲ ಏಕೆಂದರೆ ಅಂತಹ ಯಾವುದೇ ನಷ್ಟಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ

ವಿಶ್ರಾಂತಿ ವಲಯ: ಕ್ರೀಡಾಪಟುಗಳು ಓಡಿದ ನಂತರ ವ್ಯಾಯಾಮ ಮಾಡಲು ರಿಲ್ಯಾಕ್ಸೇಶನ್ ಜೋನ್ ವ್ಯವಸ್ಥೆಗೊಳಿಸಲಾಗಿದೆ.

ಶೌಚಾಲಯಗಳು: ಭಾಗವಹಿಸುವವರ ಸಂಖ್ಯೆಯನ್ನು ಆಧರಿಸಿ ಮೊಬೈಲ್ ಶೌಚಾಲಯಗಳು ಇರುತ್ತವೆ.

ಕಾರ್ಯಕ್ರಮ, ವೀಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ :
ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಪೋಟೋ ಮತ್ತು ವಿಡಿಯೋ ಮಾಡಲಾಗುವುದು.
ಫ್ಲ್ಯಾಗ್-ಆಫ್ ಮತ್ತು ಬಹುಮಾನ ವಿತರಣೆಯ ಸಮಯದಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಬಹುಮಾನ ವಿತರಣಾ ಕಾರ್ಯಕ್ರಮವು ಓಟದ ದಿನದಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ಪಾರ್ಕಿಂಗ್ ಸ್ಥಳ

ವಾಹನ ನಿಲುಗಡೆ: ನಾಯಂಡಹಳ್ಳಿ ಸಿಗ್ನಲ್ ಪಕ್ಕದಲ್ಲಿರುವ ಮೈಸೂರು ರೋಡ್ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಎಲ್ಲಾ ವಾಹನಗಳಿಗೆ ಯೂಸ್ ಮತ್ತು ಪೇ ಪಾರ್ಕಿಂಗ್ ಸ್ಥಳವಿದೆ

ಪ್ರಮುಖ ಸೂಚನೆಗಳು:

ವೈದ್ಯರು: ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯಕೀಯ ತಂಡದವರಿಂದ ಆಂಬ್ಯುಲೆನ್ಸ್ ಒಳಗೊಂಡಂತೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಲಭ್ಯವಿರುತ್ತದೆ (ಈಗಾಗಲೇ ಆರೋಗ್ಯ ಸಮಸ್ಯೆ ಇರುವಂತವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ, ಒಂದೊಮ್ಮೆ ಭಾಗವಹಿಸಿದವರು ಪ್ರಥಮ ಚಿಕಿತ್ಸೆಯನ್ನು ಹೊರತುಪಡಿಸಿ ಬೇರಿನ್ನಾವುದಕ್ಕೂ ನಾವು ಜವಾಬ್ದಾರರಲ್ಲ).

ಆರೋಗ್ಯ ಸಮಸ್ಯೆ ಇರುವಂತವರಿಗೆ ಓಟದಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದ್ದು, ಅಂತಹ ದುರ್ಘಟನೆಗಳು ಸಂಭವಿಸಿದರೆ ನಾವು ಜವಾಬ್ದಾರರಲ್ಲ.

ಪೊಲೀಸ್ (ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ): ಕ್ರೀಡಾಪಟುಗಳು ಓಡುವ ರಸ್ತೆಯ ಉದ್ದಕ್ಕೂ, ಪೋಲೀಸ್ ರಕ್ಷಣೆ ಇರುತ್ತದೆ, ಪ್ರತಿ ಜಂಕ್ಷನ್ನಲ್ಲಿ ಟ್ರಾಫಿಕ್ ಪೊಲೀಸರು ಒಟದ ಸುಗಮ ಕ್ಷಣಕ್ಕಾಗಿ ಟ್ರಾಫಿಕ್ ಅನ್ನು ನಿಯಂತ್ರಿಸುತ್ತಾರೆ.

ಅಗ್ನಿಶಾಮಕ ದಳ: ಸುರಕ್ಷತಾ ಕ್ರಮಗಳಿಗಾಗಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ವಿನಂತಿಸಲಾಗಿದೆ.

ಹೆಸರುಗಳನ್ನು ನೋಂದಾಯಿಸಿದ ಕ್ರೀಡಾಪಟುಗಳು ಓಟದ ದಿನದಂದು, ಮೊದಲು ಬಂದವರು ಮೊದಲಿನ ಸಾಲಿನಲ್ಲಿ ನಿಲ್ಲುತ್ತಾರೆ.
ತುರ್ತುಸ್ಥಿತಿ//ಸರಕಾರಿ ನಿಬಂಧನೆಗಳು /ಸಾರ್ವಜನಿಕ ಸಭೆ ನಿಷೇಧಗಳು ಇತ್ಯಾದಿಗಳ ಸಂದರ್ಭದಲ್ಲಿ, ಓಟವನ್ನು ಮುಂದೂಡಲಾಗುತ್ತದೆ ಮತ್ತು ನಮ್ಮ ಅಧಿಕೃತ ಸಾಮಾಜಿಕ ಮಾಧ್ಯಮವಾದ Facebook, Twitter, Instagram ಮತ್ತು ವೆಬ್‌ಸೈಟ್ ನಲ್ಲಿ ಪರ್ಯಾಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ.

ಅನರ್ಹ ಗೊಳಿಸುವಿಕೆ: ಒಟಗಾರರು ತಮ್ಮ ಚೆಸ್ಟ್ /ಬಿಬ್ ನಂಬರನ್ನು ಇತರರೊಂದಿಗೆ ವಿನಿಮಯ ಮಾಡಿಕೊಂಡಿರುವುದು ಕಂಡುಬಂದರೆ, ಸ್ಪರ್ಧೆಯಿಂದ ಅನರ್ಹಗೊಳಿಸಲಾಗುತ್ತದೆ. ಅಂತಹ ಓಟಗಾರರು ಯಾವುದೇ ಸಮಯ(ಟೈಮಿಂಗ್ ಸರ್ಟಿಫಿಕೇಟ್) ಅಥವಾ ಬಹುಮಾನದ ಹಣಕ್ಕೆ ಅರ್ಹರಾಗಿರುವುದಿಲ್ಲ(ಅನ್ವಯಿಸುವಲ್ಲಿ).

ಒಮ್ಮೆ ನೋಂದಣಿ ಪೂರ್ಣಗೊಂಡ ನಂತರ ಪ್ರವೇಶ ಶುಲ್ಕವನ್ನು ಯಾವುದೇ ಸಂದರ್ಭಗಳಲ್ಲಿ ಮರುಪಾವತಿಸಲಾಗುವುದಿಲ್ಲ ಮತ್ತು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಮತ್ತು ಭವಿಷ್ಯದ ಕ್ರೀಡೆಗಳಿಗೆ ನೋಂದಣಿ ಶುಲ್ಕವನ್ನು ವರ್ಗಾಯಿಸಲಾಗುವುದಿಲ್ಲ.


ಸೂಚನೆ: 

  1. 9.07.2023ರ ಈವೆಂಟ್‌ನ ತಮ್ಮ ಪೋಟೋ ಅಥವಾ ವೀಡಿಯೊವನ್ನು ನಮ್ಮ ಮುಂಬರುವ ಈವೆಂಟ್‌ನ ಪ್ರಚಾರಕ್ಕಾಗಿ ಬಳಸಬಹುದು. 
  2. ಐದು ಚೆಕಿಂಗ್ ಪಾಯಿಂಟ್ಗಳು ಇರುತ್ತವೆ. ಪ್ರತಿ ಹಂತದಲ್ಲಿ ಅಧಿಕಾರಿಗಳು ಓಟದಲ್ಲಿ ತಮ್ಮ ಸ್ಥಾನ ಮತ್ತು ತಮ್ಮ ಜೊತೆಗೆ ಓಡುವ ಕ್ರೀಡಾಪಟುಗಳೊಂದಿಗೆ ತಮ್ಮ ಚಟುವಟಿಕೆಗಳನ್ನು ಗಮನಿಸುತ್ತಾರೆ. 
  3. ಈವೆಂಟ್ನ ಆರಂಭದಿಂದ ಅಂತ್ಯದವರೆಗೆ, ಭಾಗವಹಿಸುವವರು ಪೊಲೀಸರು ಮತ್ತು ನಮ್ಮ ಅಧಿಕಾರಿಗಳ ಕಣ್ಗಾವಲಿನಲ್ಲಿರುತ್ತಾರೆ.

ಹೆಚ್ಚಿನ ವಿವರಗಳಿಗಾಗಿ: ಆಕಾಂಕ್ಷಿಗಳು ಕಛೇರಿ ಸಮಯ ಬೆಳಿಗ್ಗೆ 11:00 ರಿಂದ ಸಾಯಂಕಾಲ 5:00 ಗಂಟೆಯ ಮುಂಚಿತವಾಗಿ ಕರೆ ಮಾಡಬಹುದು ಅಥವಾ,ಪೂರ್ವ ಅನುಮತಿಯೊಂದಿಗೆ, ವೈಯಕ್ತಿಕವಾಗಿ ಭೇಟಿ ನೀಡಬಹುದು. ಮೊಬೈಲ್ ಮತ್ತು (WhatsApp) ಸಂಖ್ಯೆ: 9448387950, 9590981865

ಕಚೇರಿ ವಿಳಾಸ: #8 ಸಾಯಿ ರೋಡ್, ಬಿದ್ರು ಮಳೆ ಸರ್ಕಲ್ ಹತ್ತಿರ, ವಿನಾಯಕ ಬಡಾವಣೆ, ನಾಯಂಡಹಳ್ಳಿ, ಬೆಂಗಳೂರು –560026, ಇ-ಮೇಲ್:- veeraiah_hm@yahoo.com WhatsApp and Google Pay/ PhonePe/ Paytm Number-9448387950.